ವಿಪರ್ಯಾಸ
ಬದುಕು ವಿರಹ ವೇದನೆ 407ನಲ್ಲಿ ಕಿಕ್ಕಿರಿದ ಜನ
ಬಸ್ಸು ಕಾಲಿ ಕಾಲಿ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿಲ್ಲ
ಕಾರಣ ಮೊಬೈಲು ಅದಿದ್ದರೆ ಬರಿ ಐಲು
ಗುಪ್ತಗಾಮಿನಿಯಂತೆ ಬರುವ ಮೆಸೇಜು
ಒಳಗೊಳಗೆ ಏನೋ ಖುಷಿ, ಕಾತರ.
ಕಾಲ್ ಮಾಡಿದರೆ out off coverage area.
ನವೆಂಬರ್ ನಲ್ಲೂ ಮಾತಿಗೊಮ್ಮೆ
ಯಾ ಟೆಲ್ಮಿ ಎಂಬ ಅಂಗ್ಲ ಪದಗಳು
ಕನ್ನಡವೇ ಉಸಿರೆಂದವರಿಗೆ ಅಪೊಲೋದಲ್ಲಿ
ಅಕ್ಷಿಜನ್ ಹಾಕಲಾಗಿದೆ
ಬಿಳಿಯ ನರ್ಸಿನ ಕೈ ಸೋಕಿ ಮನಸು ಮಾಯಾಮೃಗ
ರೂಪಾಯಿಗೆ ಎರಡೇ ಗಣೇಶ್ ಬೀಡಿ
ಸಿಗರೇಟು ದುಬಾರಿ
ಡಿಸೆಂಬರ್ ಚಳಿಯಲ್ಲು ಮಲ್ಯ ನೆನಪಾಗುತ್ತಾನೆ
ಅವಳ ಕಾಲೇಜ್ ಮುಂದೆ ನಿಂತು
ಕಾಯುವ ಸಂಭ್ರಮ
ನೀನು ನಕ್ಕರೆ ಹಾಲು ಸಕ್ಕರೆ
ಸ್ವರ್ಗದಲ್ಲಿ ಸೆರೆವಾಸ
ಜೇಬಿನಲ್ಲಿ ಹತ್ತೇ ರೂಪಾಯಿ
ರಾತ್ರಿ ಕನಸು ಚಂದಮಾಮ
ಬೆಳಗೆ ಬದುಕು ಉದಯ ಕಿರಣ. . .
No comments:
Post a Comment